ಡಯೊಫೇಂಟಸ್	 -	
ಕ್ರಿ. ಶ. 250ರ ಸುಮಾರಿಗೆ ಅಲೆಕ್ಸಾಂಡ್ರಿಯದಲ್ಲಿ ಪರಸಿದ್ಧನಾಗಿದ್ದ ಗ್ರೀಕ್ ಗಣಿತ ವಿದ್ವಾಂಸ. ದಂಥ ಸಮೀಕರಣಗಳಿಗೆ, ಯಾವುದೂ ಶೂನ್ಯವಲ್ಲದ ಪೂರ್ಣಾಂಕಗಳಲ್ಲಿ, ಪರಿಹಾರಗಳನ್ನು ಪಡೆಯುವ ದಿಶೆಯಲ್ಲಿ ಕ್ರಮಬದ್ಧವಾಗಿ ಶ್ರಮಿಸಿದ ಮೊದಲಿಗ. ಭಿನ್ನರಾಶಿಗಳನ್ನು ಸಂಖ್ಯೆಗಳೆಂದು ಪರಿಗಣಿಸಿದ ಮೊದಲ ಗ್ರೀಕನೂ ಈತನೇ. ಈಗ ಸಮೀಕರಣಕ್ಕೆ 32+42=52, 52+122=132 ಇವೇ ಮೊದಲಾದ ವಿಶೇಷ ಪರಿಹಾರಗಳು ಡಯೋಫೇಂಟಸನಿಗಿಂತ ಅದೆಷ್ಟೊ ಹಿಂದಿನ ಪೈಥಾಗೊರಸ್ (ಕ್ರಿ. ಪೂ. ಸು. 582-ಕ್ರಿ.ಪೂ.ಸು. 497) ಮತ್ತು ಆತನ ಅನಂತರದ ಗ್ರೀಕ್ ಗಣಿತಜ್ಞರಿಗೆ ತಿಳಿದಿದ್ದುವು. ಆದರೆ ಸಮೀಕರಣದ ಪೂರ್ಣಪರಿಹಾರಕ್ಕೆ ಸೂತ್ರವನ್ನು ಮೊದಲಿಗೆ ಒದಗಿಸಿದಾತ ಡಯೊಫೇಂಟಸನೇ. ಇದನ್ನು ಆಧರಿಸಿ ಮುಂದೆ ಫರ್ಮಾ (ಕ್ರಿ. ಶ. 1601-1665) ಎಂಬ ಸಮೀಕರಣಗಳಲ್ಲಿ ಅಸಾಧ್ಯತೆಯನ್ನು ಪ್ರದರ್ಶಿಸಿದ. ಈ ಕಾರಣದಿಂದಾಗಿ ಯಾವ ಸಮೀಕರಣಗಳಲ್ಲಿ ನಾವು ಕೇವಲ ಪೂರ್ಣಾಂಕ ಪರಿಹಾರಗಳನ್ನು ಮಾತ್ರ ಪಡೆಯಲು ಹವಣಿಸುತ್ತೇವೋ ಅಂಥವನ್ನು ಡಯೋಫೇಂಟೈನ್ ಸಮೀಕರಣಗಳೆಂದು ಕರೆಯುವುದು ವಾಡಿಕೆಯಾಗಿದೆ. 				(ಕೆ. ಆರ್. ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ